Friday, 14 August 2015

Voice of Sharana

ಮರೆಯ ನೂಲು ಸರಿಯೆ
ನಾಚುವುದು ನೋಡಾ ಗಂಡು ಹೆಣ್ಣೆಂಬ ಜಾತಿ
ಪ್ರಾಣದೊಡೆಯ ನೀ ಜಗದಲ್ಲಿ
ತೆರಹಿಲ್ಲದೊಪ್ಪುಡೆ ನಾಚಲೆಡೆಯುಂಟೆ ಹೇಳಾ!
ಚೆನ್ನಮಲ್ಲಿಕಾರ್ಜುನಯ್ಯ ಜಗವೆಲ್ಲ ಕಣ್ಣಾಗಿ ನೋಡುತ್ತಿರೆ
ಮುಚ್ಚಿ ಮರೆಯಿಸುವೆನೆಂತು ಹೇಳಾ ಅಯ್ Akkanaa Vachana

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,
ವಾಯುವಿನ ಚಲನೆ, ತರುಗುಲ್ಮಲತಾದಿಗಳಲ್ಲಿಯ ತಳಿರು ಪುಷ್ಪ
ಷಡುವರ್ಣಂಗಳೆಲ್ಲ ಹಗಲಿನ [ಪೂಜೆ]
ಚಂದ್ರಪ್ರಕಾಶ, ನಕ್ಷತ್ರ, ಅಗ್ನಿ,
ವಿದ್ಯುದ್ ಆದಿಗಳು ದೀಪ್ತಿಮಯವೆನಿಸಿಪ್ಪುವುಗಳೆಲ್ಲ
ಇರುಳಿನ ಪೂಜೆ;
ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
Akkanaa Vachana
ವಿಜ್ಙಾನದಿಂದ ಮಾನವನಿಗೆ ವಿಷಯಾನಂದ (Sensual pleasure)ವೂ, 
ತತ್ತ್ವ ಜ್ಙಾನದಿಂದ ಬೌದ್ಧಿಕಾನಂದ (Intellectual pleasure)ವೂ,
  ಧರ್ಮ-ಆಧ್ಯಾತ್ಮಗಳಿಂದ ಆತ್ಮಾನಂದದ (Spiritual pleasure) ವೂ ಸಿಗುತ್ತದೆ.
-ಸದ್ಗುರು ಸ್ವಾಮಿ ಲಿಂಗಾನಂದರು

By Science and technology-We will enjoy Material or sensual happiness
By reading and listening philosophy - we will enjoy and improve our Intellectual pleasure

Through Dharma and spiritual (Spec.Meditation) practices - we will enjoy spiritual pleasure
By - Sadguru Linganand swamiji who spread lingayatism in India very vigorously with all bearing pain during Pravachana.
ಗುರು ಅನುಗ್ರಹ :
 ಶಕ್ತಿಪಾತ ಪ್ರಯೋಗ ದೃಷ್ಟಿಯಿಂದ ಮೂರು ವಿಧವಾಗಿ ಗುರುವು ಅನುಗ್ರಹವನ್ನು ತನ್ನ ಶಿಷ್ಯನಿಗೆ ಕರುಣಿಸುತ್ತಾರೆ.
೧. ಹಸ್ತಮಸ್ತಕ ಸಂಯೋಗದಿಂದ (ಇವರಿಗೆ ಬಸವ ಧರ್ಮದ ಪ್ರಕ್ರಿಯಲ್ಲಿ ಗರುಮೂರ್ತಿಯೆಂದು ಹೆಸರು)ಉದಾ: ಶ್ರೀ ಗುರು ಲಿಂಗಾನಂದರು & ರಾಮಕೃಷ್ಣ ಪರಮಹಂಸರು.
೨.ಅಂತಃಕರಣ ದೃಷ್ಟಿಯಿಂದ ಗುರುವು ತನ್ನಲ್ಲಿರುವ ಯೋಗಶಕ್ತಿಯನ್ನು ತನ್ನ ಶಿಷ್ಯನಗೆ ಕೊಡಬಲ್ಲರು, ಇವರಿಗೆ ಲಿಂಗಮೂರ್ತಿಯೆಂದು ಹೆಸರು. ಉದಾ: ಚನ್ನಬಸವಣ್ಣ & ಶ್ರೀ ಅರವಿಂದಾಶ್ರಮದ ಮಾತೋಶ್ರೀ.
೩.ಸಂಕಲ್ಪ ಮಾತ್ರದಿಂದ ಗುರುವು ತನ್ನಲ್ಲಿರುವ ಯೋಗಶಕ್ತಿಯನ್ನು ತನ್ನ ಶಿಷ್ಯನಗೆ ಕೊಡಬಲ್ಲರು, ಇವರಿಗೆ ಜಂಗಮ ಮೂರ್ತಿಯೆಂದು ಹೆಸರು. ಉದಾ: ಅಲ್ಲಮಪ್ರಭುದೇವರು & ಶ್ರೀ ಅರವಿಂದರು.
ಮಂತ್ರಪುರುಷ ಬಸವಣ್ಣನವರಿಗೆ ಪಂಚಪರುಷಗಳು ಅಳವಟ್ಟ ಕಾರಣ ಈ ಮೂರು ಅನುಗ್ರಹಿಸುವ ಸಾಮರ್ಥ್ಯ ಅವರಲ್ಲಿತ್ತು.
    -ಸದ್ಗುರು ಸ್ವಾಮಿ ಲಿಂಗಾನಂದರು
~: ಧರ್ಮ ಮತ್ತು ಸಂಸ್ಕಾರ :~

ಹಲವಾರು ಸಂಸ್ಕಾರಗಳಲ್ಲಿ ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದ ಪ್ರಸಂಗ. ಕೇವಲ ಮಾನವನಿಗಲ್ಲದೆ ಇತರ ವಸ್ತುಗಳಿಗೂ ಸಂಸ್ಕಾರ ಬೇಕೆಂಬುದನ್ನು ನೋಡುವಾ.

ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವದು.
ಗೋವಿನ ಸಗಣಿಗೆ ಸಂಸ್ಕಾರ ಕೊಟ್ಟರೆ ಭಸಿತವಾಗುವದು.
ಕಬ್ಬಿನ ಸಿಪ್ಪೆಗೆ ಸಂಸ್ಕಾರ ಕೊಟ್ಟರೆ ಕಾಗದವಾಗುವದು,
ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವದು.
ಗೋಧಿಗೆ ಸಂಸ್ಕಾರ ಕೊಟ್ಟರೆ ಪಾಯಸವಾಗುವದು,
ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅನ್ನವಾಗುವದು,
ಜಲಕ್ಕೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುವದು,
ತಿನ್ನುವ ಪದಾರ್ಥಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುವದು,
ಶಬ್ದಕ್ಕೆ ಸಂಸ್ಕಾರ ಕೊಟ್ಟರೆ ಮಂತ್ರವಾಗುವದು,
ಕಲ್ಲಿಗೆ ಸಂಸ್ಕಾರ ಕೊಟ್ಟರೆ ವಿಗ್ರಹವಾಗುವದು,
ಶಿಲೆಗೆ ಸಂಸ್ಕಾರ ಕೊಟ್ಟರೆ ಲಿಂಗವಾಗುವುದು.

ಅದರಂತೆ, ಭವಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಭಕ್ತನಾಗುವನು. ಜೀವನಿಗೆ ಲಿಂಗದೀಕ್ಷಾ ಸಂಸ್ಕಾರ  ಕೊಟ್ಟರೆ ಶಿವರೂಪನಾಗುವನು. ನರನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಹರರೂಪನಾಗುವನು.

~: ಸದ್ಗುರು ಸ್ವಾಮಿ ಲಿಂಗಾನಂದರು :~

No comments:

Post a Comment