Friday, 21 August 2015

ಸದ್ಗುರು ಸ್ವಾಮಿ ಲಿಂಗಾನಂದರು Poojya Swami Linganandaru

~:

~: ಧರ್ಮ ಮತ್ತು ಸಂಸ್ಕಾರ :~

ಹಲವಾರು ಸಂಸ್ಕಾರಗಳಲ್ಲಿ ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದ ಪ್ರಸಂಗ. ಕೇವಲ ಮಾನವನಿಗಲ್ಲದೆ ಇತರ ವಸ್ತುಗಳಿಗೂ ಸಂಸ್ಕಾರ ಬೇಕೆಂಬುದನ್ನು ನೋಡುವಾ.

ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವದು.
ಗೋವಿನ ಸಗಣಿಗೆ ಸಂಸ್ಕಾರ ಕೊಟ್ಟರೆ ಭಸಿತವಾಗುವದು.
ಕಬ್ಬಿನ ಸಿಪ್ಪೆಗೆ ಸಂಸ್ಕಾರ ಕೊಟ್ಟರೆ ಕಾಗದವಾಗುವದು,
ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವದು.
ಗೋಧಿಗೆ ಸಂಸ್ಕಾರ ಕೊಟ್ಟರೆ ಪಾಯಸವಾಗುವದು,
ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅನ್ನವಾಗುವದು,
ಜಲಕ್ಕೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುವದು,
ತಿನ್ನುವ ಪದಾರ್ಥಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುವದು,
ಶಬ್ದಕ್ಕೆ ಸಂಸ್ಕಾರ ಕೊಟ್ಟರೆ ಮಂತ್ರವಾಗುವದು,
ಕಲ್ಲಿಗೆ ಸಂಸ್ಕಾರ ಕೊಟ್ಟರೆ ವಿಗ್ರಹವಾಗುವದು,
ಶಿಲೆಗೆ ಸಂಸ್ಕಾರ ಕೊಟ್ಟರೆ ಲಿಂಗವಾಗುವುದು.

ಅದರಂತೆ, ಭವಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಭಕ್ತನಾಗುವನು. ಜೀವನಿಗೆ ಲಿಂಗದೀಕ್ಷಾ ಸಂಸ್ಕಾರ  ಕೊಟ್ಟರೆ ಶಿವರೂಪನಾಗುವನು. ನರನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಹರರೂಪನಾಗುವನು.

~: ಸದ್ಗುರು ಸ್ವಾಮಿ ಲಿಂಗಾನಂದರು :~

~:
~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~

ಹಲವಾರು ಜನ ಮನಶ್ಯಾಸ್ತಜ್ಞರು ಕನಸಿನ ಬಗ್ಗೆ ವಿವೇಚಿಸಿದ್ದರೂ, ಅವರೆಲ್ಲರ ದೃಷ್ಟಿಕೋನ ಮತ್ತು ಸಂಶೋಧನೆಗಳು ಸಾಮಾನ್ಯ ಕನಸುಗಳನ್ನು ಕುರಿತಾಗಿವೆ.

ಅಕ್ಕಮಹಾದೇವಿಯು ಕಂಡ ದೈವೀಕನಸು ಒಂದು ದೃಷ್ಟಿಯಿಂದ ವಿಶೇಷವಾಗಿದ್ದರೂ, ಅಕ್ಕಮಹಾದೇವಿ ಹಗಲಿರುಳು ಶಿವನ ಚಿಂತಯಲ್ಲಿದ್ದುದರಿಂದ, ದಿವ್ಯಾನುಭವ ಕೂಟಕ್ಕಾಗಿ ಹಂಬಲಿಸುತ್ತಿದ್ದುದರಿಂದ ಬಹುಶಃ ಆ ಆಸೆಯಿಂದ ಆಕೆಯ ಕನಸಿನಲ್ಲಿ ತೃಪ್ತಿಹೋಂದಿದೆ ಎಂದು ಹೇಳಬಹುದು. ಸಾಮಾನ್ಯ ಕಾಮನೆಗಳು ಕನಸಿನಲ್ಲಿ ತೃಪ್ತಿಹೊಂದಿಂದರೆ, ಅಕ್ಕಮಹಾದೇವಿಯ ಆಧ್ಯಾತ್ಮಿಕ ಕಾಮನೆ ಪವಿತ್ರವಾದ ದ್ಯೆವೀ ಕನಸಿನಲ್ಲಿ ತೃಪ್ತಿಹೊಂದಿದೆ ಎಂದು ಭಾವಿಸೋಣ.

"ಅಕ್ಕ ಕೇಳವ್ವ, ಅಕ್ಕಯ್ಯ ನಾನೊಂದು ಕನಸ ಕಂಡೆ
ಅಕ್ಕಿಯಡಕೆ ತೆಂಗಿನಕಾಯಿ ಕಂಡೆ, ಚಿಕ್ಕಚಿಕ್ಕ ಕಡೆಗಳ
ಸುಲಿಪಲ್ಲ ಗೊರವನು ಭಿಕ್ಷಕ್ಕೆ ಬಂದುದ ಕಂಡೆನವ್ವಾ!
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಚನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದನು."

ಹಗಲಿರುಳು ಚನ್ನಮಲ್ಲಿಕಾರ್ಜುನನ ಧ್ಯಾನದಲ್ಲಿರುವ ಅಕ್ಕನು ಸ್ವಪ್ನಾವಸ್ಧೆಯಲ್ಲಿಯು ತನ್ನ ನಲ್ಲ ಚನ್ನಮಲ್ಲಿಕಾರ್ಜುನನ್ನು ಕಂಡಿದ್ದಾಳೆ.

ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು ಬಿ.ಎಸ್ ಸಿ. ಪದವೀಧರರಾಗಿ ನಮ್ಮ ಆಶ್ರಮಕ್ಕೆ ಬಂದರು. ಜಂಗಮದೀಕ್ಷೆ ಪಡೆದುಕೊಂಡರು. ನಂತರ ಅವರು ಎಂ.ಎ.ಫಿಲಾಸಫಿ ಓದಬೇಕೆಂದು ಒಂದು ದಿನ ಕನಸಿನಲ್ಲಿ ದೈವೀಆಜ್ಞೆ ಪಡೆದರು. ಯಾವ ವಿಶ್ವವಿದ್ಯಾಲಯದಲ್ಲಿ ಓದಬೇಕೆಂದು ಆಲೋಚಿಸುವಾಗಲೇ ಮತ್ತೊಂದು ದಿನ ಕಂಡ ಕನಸಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದಬೇಕೆಂದು ನಿರೂಪವನ್ನು ಪಡೆದರು, ಅಷ್ಟೆಅಲ್ಲದೆ ಧಾರವಾಡದಲ್ಲಿ ಒಂದು ಆಶ್ರಮವಾದಂತೆ ಕನಸು ಕಂಡು, ಆಶ್ರಮಮವಾಗಲಿರುವ ಜಾಗದ ಸ್ಪಷ್ಟ ಚಿತ್ರ ಕಂಡರು.

ಈ ಬಗೆಯ ಕನಸುಗಳು ಸುಪ್ತ ಮನಸ್ಸಿನ ಅತೃಪ್ತ ಆಸೆಗಳು ತೃಪ್ತಿ ಹೊಂದುವ ವಿಧಾನವಾಗಿರದೆ, ಇನ್ನೊಂದು ಹೊರಗಿನ (Objective Reality) ಶಕ್ತಿಯಿಂದ ಆದೇಶ ಹೊಂದಿದ್ದವಾಗಿವೆ; ಮತ್ತು ಭವಿಷ್ಯ ಸೊಚಕ ಕನಸುಗಳಾಗಿವೆ, ಮಾನವನ ಇಂದ್ರಿಯಾನುಭವಕ್ಕೆ ನಿಲುಕದ ಅತೀಂದ್ರಿಯ ಅನುಭವಗಳು ವೈಜ್ಞಾನಿಕ ವಿಶ್ಲೇಷಣೆಯ ಮಾಪನಕ್ಕೆ ಸಿಲುಕದೆ ಎಷ್ಟೋ ಇವೆ ಎಂಬುದನ್ನು ನಾವರಿತರೆ ಸಾಕು.

~: ಸದ್ಗುರು ಸ್ವಾಮಿ ಲಿಂಗಾನಂದರು :~

Tuesday, 18 August 2015

Vishwa Guru Basavanna

ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ (೧೧೩೪-೧೧೯೬)

ಪರಿವಿಡಿ (index)

ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಧರ್ಮವೊಂದನ್ನು ಕೊಟ್ಟರು. ಇಂಗಳೇಶ್ವರ ಬಾಗೇ ವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿ. ಎಪ್ರಿಲ್ ೩೦ ೧೧೩೪) ರೋಹಿಣಿ ನಕ್ಷತ್ರದಲ್ಲಿ ಜನಿಸಿ ಯಾವುದೇ ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಬಂದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು.

ಒಂದು ದಿನ (ದಿ. ೧೪ನೇ ಜನವರಿ ೧೧೫೫) ಪರಮಾತ್ಮನ ದಿವ್ಯ ದರ್ಶನವಾಯಿತು; ಅನುಗ್ರಹಿತರಾದರು. ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ, ಪ್ರಾಣಿಗಳ ಅಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು, ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ, ಇದು ಗೋಲಾಕಾರದಲ್ಲಿದೆ. ಆದ್ದರಿಂದ ಲಿಂಗದೇವನನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟಲಿಂಗದ ಪರಿಕಲ್ಪನೆ ಕೊಟ್ಟರು. ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನನ್ನಾಗಿ ಮಾಡುವ ಸಾಧನವಾಗಬೇಕೆಂದು ಅದನ್ನು ಗಣ ಲಾಂಛನವನ್ನಾಗಿ ಮಾಡಿದರು.

ಪರಮಾತ್ಮನ ದಿವ್ಯಾನುಭವ ಪಡೆದು, ನವ ಸಮಾಜ ನಿರ್ಮಾಣದ ರೂಪುರೇಷೆಗಳನ್ನು ತಮ್ಮ ಮನದಲ್ಲಿ ಹೊಂದಿ ಕಲ್ಯಾಣದ ಕಾರ್ಯಕ್ಷೇತ್ರವನ್ನು ಪ್ರವೇಶಿಸಿದರು. ಸೋದರ ಮಾವನ ಮಗಳು ನೀಲಗಂಗಳನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ, ಪ್ರಧಾನಿ(ದಂಡನಾಯಕ)ಯಾಗಿ ಕಾಯಕ ನಿರ್ವಹಿಸಿದರು.

ಅನುಭವ ಮಂಟಪ ರಚಿಸಿ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು. ಹುಟ್ಟಿನಿಂದ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಪ್ರೇರೇಪಿಸಿ ಧರ್ಮಗುರು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು.

ಧರ್ಮಪಿತರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನವಾಗಿ ಅವರು ವರ್ಣಾಂತರ ವಿವಾಹದಲ್ಲಿ ಭಾಗಿಯಾದುದಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ, ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶಮಾಡಲು ಸನ್ನದ್ಧರಾದಾಗ ವೀರಮಾತೆ ಅಕ್ಕನಾಗಲಾಂಬಿಕೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣ, ವೀರ ಗಣಾಚಾರಿ ಮಡಿವಾಳ ಮಾಚಯ್ಯನವರು ವೀರಾಗ್ರಣಿಗಳಾಗಿ ಕಾದಾಡಿ ವಚನ ವಾಙ್ಮಯ ನಿಧಿಯನ್ನು ಉಳಿಸಿಕೊಟ್ಟರು. ಅದಿಂದು ನಮ್ಮೆಲ್ಲರ, ಕರ್ನಾಟಕದ, ಭಾರತದ, ವಿಶ್ವದ ಹೆಮ್ಮೆಯ ಆಸ್ತಿಯಾಗಿದೆ.

ಇಂತಹ ಮಹಾನ್ ನೇತಾರರಾದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರು; ಧರ್ಮಪಿತರು, ಮಂತ್ರಪುರುಷರು. ೬೨ ವರ್ಷ ೩ ತಿಂಗಳು ೨ ದಿವಸಗಳ ಕಾಲ ಇಳೆಯಲ್ಲಿ ಬಾಳಿದ ಬಸವಣ್ಣನವರು ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು (ದಿ. ಜುಲೈ ೭ ೧೧೯೬) ಉರಿಯುಂಡ ಕರ್ಪುರದಂತೆ ಲಿಂಗೈಕ್ಯರಾದರು.

Friday, 14 August 2015

Voice of Sharana

ಮರೆಯ ನೂಲು ಸರಿಯೆ
ನಾಚುವುದು ನೋಡಾ ಗಂಡು ಹೆಣ್ಣೆಂಬ ಜಾತಿ
ಪ್ರಾಣದೊಡೆಯ ನೀ ಜಗದಲ್ಲಿ
ತೆರಹಿಲ್ಲದೊಪ್ಪುಡೆ ನಾಚಲೆಡೆಯುಂಟೆ ಹೇಳಾ!
ಚೆನ್ನಮಲ್ಲಿಕಾರ್ಜುನಯ್ಯ ಜಗವೆಲ್ಲ ಕಣ್ಣಾಗಿ ನೋಡುತ್ತಿರೆ
ಮುಚ್ಚಿ ಮರೆಯಿಸುವೆನೆಂತು ಹೇಳಾ ಅಯ್ Akkanaa Vachana

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,
ವಾಯುವಿನ ಚಲನೆ, ತರುಗುಲ್ಮಲತಾದಿಗಳಲ್ಲಿಯ ತಳಿರು ಪುಷ್ಪ
ಷಡುವರ್ಣಂಗಳೆಲ್ಲ ಹಗಲಿನ [ಪೂಜೆ]
ಚಂದ್ರಪ್ರಕಾಶ, ನಕ್ಷತ್ರ, ಅಗ್ನಿ,
ವಿದ್ಯುದ್ ಆದಿಗಳು ದೀಪ್ತಿಮಯವೆನಿಸಿಪ್ಪುವುಗಳೆಲ್ಲ
ಇರುಳಿನ ಪೂಜೆ;
ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
Akkanaa Vachana
ವಿಜ್ಙಾನದಿಂದ ಮಾನವನಿಗೆ ವಿಷಯಾನಂದ (Sensual pleasure)ವೂ, 
ತತ್ತ್ವ ಜ್ಙಾನದಿಂದ ಬೌದ್ಧಿಕಾನಂದ (Intellectual pleasure)ವೂ,
  ಧರ್ಮ-ಆಧ್ಯಾತ್ಮಗಳಿಂದ ಆತ್ಮಾನಂದದ (Spiritual pleasure) ವೂ ಸಿಗುತ್ತದೆ.
-ಸದ್ಗುರು ಸ್ವಾಮಿ ಲಿಂಗಾನಂದರು

By Science and technology-We will enjoy Material or sensual happiness
By reading and listening philosophy - we will enjoy and improve our Intellectual pleasure

Through Dharma and spiritual (Spec.Meditation) practices - we will enjoy spiritual pleasure
By - Sadguru Linganand swamiji who spread lingayatism in India very vigorously with all bearing pain during Pravachana.
ಗುರು ಅನುಗ್ರಹ :
 ಶಕ್ತಿಪಾತ ಪ್ರಯೋಗ ದೃಷ್ಟಿಯಿಂದ ಮೂರು ವಿಧವಾಗಿ ಗುರುವು ಅನುಗ್ರಹವನ್ನು ತನ್ನ ಶಿಷ್ಯನಿಗೆ ಕರುಣಿಸುತ್ತಾರೆ.
೧. ಹಸ್ತಮಸ್ತಕ ಸಂಯೋಗದಿಂದ (ಇವರಿಗೆ ಬಸವ ಧರ್ಮದ ಪ್ರಕ್ರಿಯಲ್ಲಿ ಗರುಮೂರ್ತಿಯೆಂದು ಹೆಸರು)ಉದಾ: ಶ್ರೀ ಗುರು ಲಿಂಗಾನಂದರು & ರಾಮಕೃಷ್ಣ ಪರಮಹಂಸರು.
೨.ಅಂತಃಕರಣ ದೃಷ್ಟಿಯಿಂದ ಗುರುವು ತನ್ನಲ್ಲಿರುವ ಯೋಗಶಕ್ತಿಯನ್ನು ತನ್ನ ಶಿಷ್ಯನಗೆ ಕೊಡಬಲ್ಲರು, ಇವರಿಗೆ ಲಿಂಗಮೂರ್ತಿಯೆಂದು ಹೆಸರು. ಉದಾ: ಚನ್ನಬಸವಣ್ಣ & ಶ್ರೀ ಅರವಿಂದಾಶ್ರಮದ ಮಾತೋಶ್ರೀ.
೩.ಸಂಕಲ್ಪ ಮಾತ್ರದಿಂದ ಗುರುವು ತನ್ನಲ್ಲಿರುವ ಯೋಗಶಕ್ತಿಯನ್ನು ತನ್ನ ಶಿಷ್ಯನಗೆ ಕೊಡಬಲ್ಲರು, ಇವರಿಗೆ ಜಂಗಮ ಮೂರ್ತಿಯೆಂದು ಹೆಸರು. ಉದಾ: ಅಲ್ಲಮಪ್ರಭುದೇವರು & ಶ್ರೀ ಅರವಿಂದರು.
ಮಂತ್ರಪುರುಷ ಬಸವಣ್ಣನವರಿಗೆ ಪಂಚಪರುಷಗಳು ಅಳವಟ್ಟ ಕಾರಣ ಈ ಮೂರು ಅನುಗ್ರಹಿಸುವ ಸಾಮರ್ಥ್ಯ ಅವರಲ್ಲಿತ್ತು.
    -ಸದ್ಗುರು ಸ್ವಾಮಿ ಲಿಂಗಾನಂದರು
~: ಧರ್ಮ ಮತ್ತು ಸಂಸ್ಕಾರ :~

ಹಲವಾರು ಸಂಸ್ಕಾರಗಳಲ್ಲಿ ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದ ಪ್ರಸಂಗ. ಕೇವಲ ಮಾನವನಿಗಲ್ಲದೆ ಇತರ ವಸ್ತುಗಳಿಗೂ ಸಂಸ್ಕಾರ ಬೇಕೆಂಬುದನ್ನು ನೋಡುವಾ.

ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವದು.
ಗೋವಿನ ಸಗಣಿಗೆ ಸಂಸ್ಕಾರ ಕೊಟ್ಟರೆ ಭಸಿತವಾಗುವದು.
ಕಬ್ಬಿನ ಸಿಪ್ಪೆಗೆ ಸಂಸ್ಕಾರ ಕೊಟ್ಟರೆ ಕಾಗದವಾಗುವದು,
ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವದು.
ಗೋಧಿಗೆ ಸಂಸ್ಕಾರ ಕೊಟ್ಟರೆ ಪಾಯಸವಾಗುವದು,
ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅನ್ನವಾಗುವದು,
ಜಲಕ್ಕೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುವದು,
ತಿನ್ನುವ ಪದಾರ್ಥಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುವದು,
ಶಬ್ದಕ್ಕೆ ಸಂಸ್ಕಾರ ಕೊಟ್ಟರೆ ಮಂತ್ರವಾಗುವದು,
ಕಲ್ಲಿಗೆ ಸಂಸ್ಕಾರ ಕೊಟ್ಟರೆ ವಿಗ್ರಹವಾಗುವದು,
ಶಿಲೆಗೆ ಸಂಸ್ಕಾರ ಕೊಟ್ಟರೆ ಲಿಂಗವಾಗುವುದು.

ಅದರಂತೆ, ಭವಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಭಕ್ತನಾಗುವನು. ಜೀವನಿಗೆ ಲಿಂಗದೀಕ್ಷಾ ಸಂಸ್ಕಾರ  ಕೊಟ್ಟರೆ ಶಿವರೂಪನಾಗುವನು. ನರನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಹರರೂಪನಾಗುವನು.

~: ಸದ್ಗುರು ಸ್ವಾಮಿ ಲಿಂಗಾನಂದರು :~